Appeal
ಪ್ರತಿ ಶಾಖೆಯಲ್ಲೂ ಕಾರ್ಯಕಾರಿ ಸಮಿತಿಯು ಅಲ್ಲಿನ ಪಂಡಿತರು ಮುಖ್ಯಸ್ಥರ ಸಹಾಯದಿಂದ ಕಾರ್ಯಚಟುವಟಿಕೆಗಳನ್ನು ವಿಶ್ವಸಮಿತಿಯ ಮೇಲ್ವಿಚಾರಣೆಯಲ್ಲಿ ನಡೆಸುತ್ತದೆ.
ಲೆಕ್ಕಪತ್ರಗಳು ಪ್ರತಿ ವರ್ಷವೂ ಆಡಿಟ್ ಆಗುತ್ತದೆ.
ಸಂಸ್ಥೆಗೆ 80G ವರ್ಗದ ವರಮಾನ ತೆರಿಗೆಯೂ ಇದೆ.
ಆಸಕ್ತರು ನೀಡುವ ಚಂದಾ, ದಾನಗಳಿಂದ ಉತ್ಪನ್ನವಾದ ಬಡ್ಡಿ ಮತ್ತು ಕಾಣಿಕೆಗಳೇ ಕಾರ್ಯಾಲಯದ ಆರ್ಥಿಕ ಜೀವವಾಳ.
ಹೊಳೆನರಸೀಪುರದಲ್ಲಿ ಒಂಭತ್ತೂವರೆ ಲಕ್ಷದ ಅತಿಥಿ ಗೃಹ, ಅವ್ಯಾಹತವಾಗಿ ನಡೆಯುತ್ತಿರುವ ಗ್ರಂಥಮುದ್ರಣಗಳು ಅಭಿಮಾನಿಗಳ ಔದಾರ್ಯದ ಫಲ.
ಎಲ್ಲಾ ಕಾರ್ಯಗಳೂ ಶ್ರೀಶ್ರೀಗಳವರು ಬರೆದಿಟ್ಟಿರುವ, ನಡೆಸಿ ತೋರಿಸಿರುವ ರೀತಿಗೆ ಅನುಸಾರವಾಗಿ ರೂಪಿತವಾಗುತ್ತದೆ.
ಇವುಗಳ ಉಸ್ತುವಾರಿ ಶ್ರೀಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ವಿಶ್ವಸ್ತಸಮಿತಿಗೆ, ನಡೆಸುವ ಹೊಣೆ.
ಹೊಳೆನರಸೀಪುರದಲ್ಲಿ ಶ್ರೀ ತಾಂಡವೇಶ್ವರ್ ಮತ್ತು ಬೆಂಗಳೂರಿನಲ್ಲಿ ಹೆಚ್. ಎಸ್. ನರಸಿಂಹಮೂರ್ತಿಗಳ ಅಧ್ಯಕ್ಷತೆಯಲ್ಲಿ ಕಾರ್ಯ ಸಮಿತಿಗಳಿವೆ.

